ಇನ್ನೂ ಯಾವುದೇ ವಿಮರ್ಶೆಗಳು ಇಲ್ಲ. ನಿಮ್ಮ ಅನುಭವವನ್ನು ಹಂಚಿಕೊಳ್ಳುವವರಲ್ಲಿ ಮೊದಲಿಗರಾಗಿ!
ಇತ್ತೀಚಿನ ಪೋಸ್ಟ್ಗಳು
KSVS Official
ಸೆಪ್ಟೆಂ 7,2026, 12:12 AM
🎥 Video
2,760
0
0
KSVS Official
ಸೆಪ್ಟೆಂ 7,2026, 12:12 AM
📷 Photo
2,860
0
0
KSVS Official
ಸೆಪ್ಟೆಂ 7,2026, 12:12 AM
ಕರ್ನಾಟಕ ಲೋಕಸೇವಾ ಆಯೋಗದ ಘನoದಾರಿ ವ್ಯಕ್ತಿಗಳು, ನೇಮಕಾತಿ ಹಗರಣಗಳಲ್ಲಿ ಭಾಗಿಯಾಗಿರುವ ಒಂದಷ್ಟು ಪ್ರಭಾವಿ ರಾಜಕಾರಣಿಗಳು ಹಾಗೂ ವಿವಿಧ ನೇಮಕಾತಿಗಳಲ್ಲಿ ಅಕ್ರಮವಾಗಿ ಹುದ್ದೆಗಳನ್ನು ಪಡೆದಿರುವ ಒಂದಷ್ಟು ರಣಗೇಡಿ ಅಭ್ಯರ್ಥಿಗಳೆಲ್ಲರೂ ಸೇರಿ ರಾಜ್ಯದ ಎಷ್ಟು ಅಮಾಯಕ ಬಡ ಉದ್ಯೋಗಾಕಾoಷಿಗಳ ಸಮಾಧಿಗಳ ಮೇಲೆ ತಮ್ಮ ಮಹಲುಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂಬುದನ್ನು ಈ ನಾಡಿನ ಎಲ್ಲಾ ಪ್ರಜ್ಞಾವಂತ ನಾಗರಿಕರು ಆಲೋಚಿಸಬೇಕಿದೆ.
2,930
16
0
KSVS Official
ಸೆಪ್ಟೆಂ 7,2026, 12:12 AM
ಇವರು ಸಹ ವಿದ್ಯಾರ್ಥಿಗಳೇ… ಇವರ ಹಿಂದೆಯೂ ಒಂದು ಕಥೆಯಿದೆ, ವರ್ಷಗಳ ಪರಿಶ್ರಮವಿದೆ, ಪ್ರಾಮಾಣಿಕ ಅಧ್ಯಯನವಿದೆ, ಒಂದು ಕನಸಿದೆ.
ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಏಕೆ? ಇವರ ಸಂಖ್ಯೆ ಕಡಿಮೆ ಇರಬಹುದು, ಆದರೆ ಇವರ ಕನಸುಗಳು ಚಿಕ್ಕದಲ್ಲ. ಪ್ರತಿಯೊಬ್ಬ ಅಭ್ಯರ್ಥಿಯ ಹಿಂದೆ ಒಂದು ಕುಟುಂಬದ ನಿರೀಕ್ಷೆಯಿದೆ.
⚖️ ಪಶು ವೈದ್ಯಾಧಿಕಾರಿ ಹಾಗೂ KAS 384 ಹುದ್ದೆಗಳಲ್ಲಿ ಪ್ರಾಮಾಣಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪರವಾಗಿ https://t.me/INCKarnataka ಸರ್ಕಾರ ನಿಲ್ಲಬೇಕು.. ಅಕ್ರಮ ಹಾಗೂ ಭ್ರಷ್ಟಾಚಾರ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ, ಆದರೆ ತಪ್ಪು ಮಾಡದವರ ಭವಿಷ್ಯಕ್ಕೆ ಶಿಕ್ಷೆಯಾಗಬಾರದು. 🙏
https://t.me/vinaygbhttps://t.me/DKShivakumarhttps://t.me/PriyankKhargehttps://t.me/hd_kumaraswamyhttps://t.me/BJP4Karnatakahttps://t.me/SANDEEPRAI
✊ ವಿದ್ಯಾರ್ಥಿ ಸಂಘಟನೆಯ ಗೌರವಾಧ್ಯಕ್ಷರು ಆದ https://t.me/vinaygb ಹಾಗೂ #KSVSಸಮೂಹ ಪ್ರಾಮಾಣಿಕ ವಿದ್ಯಾರ್ಥಿಗಳೊಂದಿಗೆ ಹಾಗೂ ಭ್ರಷ್ಟಾಚಾರದ ವಿರುದ್ಧ ಧೃಡವಾಗಿ ನಿಲ್ಲುತ್ತೇವೆ
KSVS Official
ಸೆಪ್ಟೆಂ 7,2026, 12:12 AM
ಎಲ್ಲಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ರೆಪೋಸ್ಟ್ ಮಾಡಿ 👆
https://x.com/Sandeep98886864/status/2095904219241029786 @kea ಹಾಗೂ @INCKarnataka ಸರ್ಕಾರದ ಗಮನಕ್ಕೆ 🙏 ಸರ್ಕಾರಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳೆಲ್ಲರೂ ಕೋಟ್ಯಾಧಿಪತಿ ಕುಟುಂಬದಿಂದ ಬಂದವರಲ್ಲ. ಬಹುತೇಕ ವಿದ್ಯಾರ್ಥಿಗಳು #ಮಧ್ಯಮ ಹಾಗೂ ಬಡ ಕುಟುಂಬಗಳ ಹಿನ್ನೆಲೆಯಿಂದ ಬಂದು, ತಮ್ಮ ಭವಿಷ್ಯಕ್ಕಾಗಿ…
https://x.com/Sandeep98886864/status/2095904219241029786
@kea ಹಾಗೂ https://t.me/INCKarnataka ಸರ್ಕಾರದ ಗಮನಕ್ಕೆ 🙏
ಸರ್ಕಾರಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳೆಲ್ಲರೂ ಕೋಟ್ಯಾಧಿಪತಿ ಕುಟುಂಬದಿಂದ ಬಂದವರಲ್ಲ. ಬಹುತೇಕ ವಿದ್ಯಾರ್ಥಿಗಳು #ಮಧ್ಯಮ ಹಾಗೂ ಬಡ ಕುಟುಂಬಗಳ ಹಿನ್ನೆಲೆಯಿಂದ ಬಂದು, ತಮ್ಮ ಭವಿಷ್ಯಕ್ಕಾಗಿ ಕಷ್ಟಪಟ್ಟು ತಯಾರಿ ನಡೆಸುತ್ತಿದ್ದಾರೆ. ಅವರ ಪರಿಸ್ಥಿತಿಯನ್ನು ಮೊದಲು ಅರ್ಥಮಾಡಿಕೊಳ್ಳಿ.
ಮೊದಲು ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯ ಅರ್ಜಿ ಶುಲ್ಕ ₹400 ಇತ್ತು. ಇದೀಗ https://t.me/KEA_karnataka ಅದನ್ನು ₹750ಕ್ಕೆ ಹೆಚ್ಚಿಸಿದೆ. ಇದರ ಮೇಲಾಗಿ, ಗಾಯದ ಮೇಲೆ ಬರೆ ಎಳೆದಂತೆ ಅಭ್ಯರ್ಥಿಗಳಿಗೆ ದೂರದ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ನೀಡಲಾಗುತ್ತಿದೆ.
ಪರೀಕ್ಷಾ ಕೇಂದ್ರಕ್ಕೆ ತೆರಳಲು ಒಬ್ಬ ವಿದ್ಯಾರ್ಥಿಗೆ ಸರಾಸರಿ ₹2,000 ಅಥವಾ ಅದಕ್ಕಿಂತ ಹೆಚ್ಚಿನ ಹೆಚ್ಚುವರಿ ಪ್ರಯಾಣ ವೆಚ್ಚವಾಗುತ್ತದೆ. ಒಂದು ತಿಂಗಳಲ್ಲಿ ಕನಿಷ್ಠ 3 ಸರ್ಕಾರಿ ಪರೀಕ್ಷೆಗಳು ನಡೆದರೆ, ಪರೀಕ್ಷಾ ಶುಲ್ಕ ಮತ್ತು ಪ್ರಯಾಣ ವೆಚ್ಚಕ್ಕಾಗಿಯೇ ವಿದ್ಯಾರ್ಥಿಗಳು ತಿಂಗಳಿಗೆ ₹8,000ಕ್ಕೂ ಹೆಚ್ಚು ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇಷ್ಟೆಲ್ಲಾ ಆರ್ಥಿಕ ಒತ್ತಡದ ನಡುವೆ, ದೂರದ ಊರಿಗೆ ಪ್ರಯಾಣಿಸಿ, ಇಡೀ ರಾತ್ರಿ ನಿದ್ದೆಯಿಲ್ಲದೆ ಪರೀಕ್ಷಾ ಕೇಂದ್ರ ತಲುಪಿದ ವಿದ್ಯಾರ್ಥಿ ಬೆಳಗ್ಗೆ ಹೇಗೆ ಲವಲವಿಕೆಯಿಂದ ಹಾಗೂ ಏಕಾಗ್ರತೆಯಿಂದ ಪರೀಕ್ಷೆ ಬರೆಯಲು ಸಾಧ್ಯ?
https://t.me/CMofKarnataka ಹಾಗೂ https://t.me/DKShivakumar ನಮ್ಮ ಮನವಿ ಇಷ್ಟೇ:
👉 ಮುಂದಿನ ದಿನಗಳಲ್ಲಿ ಪರೀಕ್ಷಾ ಅರ್ಜಿಯಲ್ಲಿಯೇ ಅಭ್ಯರ್ಥಿಗಳು ತಮ್ಮ ಆಯ್ಕೆಯ ಜಿಲ್ಲೆ/ಪರೀಕ್ಷಾ ಕೇಂದ್ರದ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿ.
👉 ಸಾಧ್ಯವಾದಷ್ಟು ಅಭ್ಯರ್ಥಿಗಳಿಗೆ ತಮ್ಮ ಸ್ವಂತ ಜಿಲ್ಲೆ ಅಥವಾ ಸಮೀಪದ ಜಿಲ್ಲೆಗಳಲ್ಲೇ ಪರೀಕ್ಷಾ ಕೇಂದ್ರ ನೀಡುವ ವ್ಯವಸ್ಥೆ ಮಾಡಿ.
👉 ವಿದ್ಯಾರ್ಥಿಗಳ ಆರ್ಥಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ಅವರ ಮೇಲಿನ ಅನಗತ್ಯ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ.
ಸರ್ಕಾರಿ ಉದ್ಯೋಗಕ್ಕಾಗಿ ಹೋರಾಡುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರವೇ ಮತ್ತೊಂದು ಆರ್ಥಿಕ ಸವಾಲಾಗಬಾರದು.
ವಿದ್ಯಾರ್ಥಿಗಳ ಭವಿಷ್ಯದ ಪರವಾಗಿ KEA ಹಾಗೂ ಸರ್ಕಾರ ತಕ್ಷಣ ಸ್ಪಂದಿಸಿ ಈ ಸಮಸ್ಯೆಯನ್ನು ಬಗೆಹರಿಸಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ. 🙏
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ
#KEA #KPSC #Karnataka #StudentIssues #GovernmentExams@KSVS2025
9902422711
Mr. Prasanna. H.,
Executive Director - KEA.
9844499748
Mr. Shreedar,
Public Respondent - KEA.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ದೊಡ್ಡ ಸಂಖ್ಯೆಯಲ್ಲಿ Any degree & PUC(Equivalent) ವಿದ್ಯಾರ್ಹತೆಯ ಆಧಾರಿತವಾದ Group-C ವೃಂದದ Non-technical ಹುದ್ದೆಗಳಿಗೆ ಮತ್ತು FDA/SDA ಹುದ್ದೆಗಳಿಗೆ ನೇರ-ನೇಮಕಾತಿ ಅಧಿಸೂಚನೆ ಹೊರಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಈ ರೀತಿ ಗೌಪ್ಯವಾಗಿ ನೋಟಿಫಿಕೇಶನ್ ಮಾಡಿ, ಏಕಾಏಕಿ ಪರೀಕ್ಷಾ ದಿನಾಂಕ ತಿಳಿಸುವುದು ಅಭ್ಯರ್ಥಿಗಳಿಗೆ ಪರೀಕ್ಷಾ ತಯಾರಿಯ ಹಿತದೃಷ್ಟಿಯಿಂದ ಸಮಂಜಸವಲ್ಲ.
ಹಾಗಾಗಿ, ಮುಂಬರುವ Group-C & FDA/SDA ಹುದ್ದೆಗಳ ನೇಮಕಾತಿ ಅಧಿಸೂಚನೆ ದಿನಾಂಕ, ಪರೀಕ್ಷೆಯ ಅಂದಾಜು ದಿನಾಂಕ & ಹುದ್ದೆಗಳ ಸಂಖ್ಯೆಯನ್ನು draft ಆಗಿ ಮಾಹಿತಿ ಒದಗಿಸುವಂತೆ, ಈ ಮೇಲ್ಕಂಡ ಗೌರವಾನ್ವಿತರಿಗೆ Whatsapp ಅಲ್ಲಿ ನೂರಾರು messages ಅನ್ನು ಕಳುಹಿಸಿ.
ಗೌರವಾನ್ವಿತರಿಗೆ ಆಗಲಾದರೂ Ground realities ಅರ್ಥ ಆಗಬಹುದು.
2,990
40
KSVS Official
ಆಗ 22,2026, 04:52 PM
Message ಗಳ ಸುರಿಮಳೆ ಉಂಟಾಗಲಿ.
ESI, FDA, SDA, Group-C ಹುದ್ದೆಗಳ ನೋಟಿಫಿಕೇಶನ್ ಬಗ್ಗೆ & exam dates ಬಗ್ಗೆ draft ಮಾಹಿತಿ ಕೇಳಿ.
ಧನ್ಯವಾದಗಳು ❤️
ನಿಮ್ಮೆಲ್ಲರ ಪ್ರೀತಿ, ಬೆಂಬಲ ಮತ್ತು ಕಾಳಜಿಗೆ ಹೃತ್ಪೂರ್ವಕ ಧನ್ಯವಾದಗಳು. ನನ್ನ ನೋವಿನ ಕ್ಷಣಗಳಲ್ಲೂ ಧೈರ್ಯ ತುಂಬಿ, ಸಾಂತ್ವನ ನೀಡಿ ನನ್ನ ಜೊತೆ ನಿಂತ ಪ್ರತಿಯೊಬ್ಬರಿಗೂ ನಾನು ಚಿರಋಣಿ.
ಇನ್ನು ಮತ್ತೆ ಮೊದಲಿನಂತೆಯೇ ನಿಮ್ಮ ಅಮರ್ ನಿಮ್ಮ ಜೊತೆ ಇರುತ್ತೇನೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಹೀಗೆ ಸದಾ ಇರಲಿ. 🙏❤️
2,880
32
0
KSVS Official
ಆಗ 22,2026, 04:52 PM
📷 Photo
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹವು ನಿನ್ನೆ ಸನ್ಮಾನ್ಯ ಸಹಕಾರಿ ಸಚಿವರನ್ನು ಭೇಟಿ ಮಾಡಿ, ಬಾಕಿ ಇರುವ ನೇಮಕಾತಿ ಪ್ರಕ್ರಿಯೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಆಗ್ರಹಿಸಿತ್ತು. ಈ ಸಂದರ್ಭದಲ್ಲಿ ಸರ್ಕಾರಕ್ಕೆ 20 ದಿನಗಳ ಕಾಲಾವಕಾಶ ನೀಡಲಾಗಿತ್ತು.
ಇದರ ಬೆನ್ನಲ್ಲೇ Apex Bank ಚುನಾವಣಾ ಪ್ರಕ್ರಿಯೆ ಸೇರಿದಂತೆ ನೇಮಕಾತಿಗೆ ಸಂಬಂಧಿಸಿದ ವಿವಿಧ ಪ್ರಕ್ರಿಯೆಗಳು ಚುರುಕುಗೊಂಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಇದು ವಿದ್ಯಾರ್ಥಿ ಸಮೂಹದ ನಿರಂತರ ಹೋರಾಟ ಹಾಗೂ ಅಭ್ಯರ್ಥಿಗಳ ಧ್ವನಿಗೆ ಸಿಕ್ಕಿರುವ ಸ್ಪಂದನೆಯಾಗಿದೆ. ಮುಂದಿನ ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆ ಸಂಪೂರ್ಣವಾಗಿ ಪೂರ್ಣಗೊಂಡು ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ದೊರೆಯಲಿ ಎಂಬುದು ನಮ್ಮ ಆಶಯ.
👆👆👆👆👆👆👆👆👆
REPOST EVERYONE AND COMMENT, 🙏♥️ AND FALLOW KSVS OFFICIAL X TWITTER ACCOUNT ♥️
ವಾರದಲ್ಲಿ 7 ದಿನಗಳಿರುತ್ತವೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದಿರುವ ಕಾಂಗ್ರೆಸ್ ರಾಜ್ಯದ ಚುಕ್ಕಾಣಿ ಹಿಡಿದಿರುವುದು ದುರಂತ
“ಒಂದು ವಾರದಲ್ಲಿ 8,000 PC ಹುದ್ದೆಗಳಿಗೆ ಅಧಿಸೂಚನೆ ಹೊರಡಿಸುತ್ತೇವೆ" ಎಂದು ಮೇ 2ರಂದು ಬಡಾಯಿ ಕೊಚ್ಚಿಕೊಂಡಿದ್ದಿರಿ ಆದರೆ ಇವತ್ತಿಗಾಗಲೇ ಮೇ 17 ಕಳೆಯುತ್ತಿದೆ.
ಉತ್ತರಿಸಿ https://t.me/INCKarnataka ?
ವಿದ್ಯಾರ್ಥಿಗಳು ಕಾಯುತ್ತಿದ್ದಾರೆ ಯಾವಾಗ ನೇಮಕಾತಿ ನಿಮ್ಮ ಒಂದು ವಾರ... ಮೂರು ವರ್ಷಗಳಿಂದ ಇನ್ನೂ ಬಂದೆ ಇಲ್ಲವೇ??
ಯಾವಾಗ ನೇಮಕಾತಿ ?